vandanaarpane

ಪ್ರಿಯ ಕನ್ನಡಿಗರೆ ನಮಸ್ಕಾರ,

ಪುರ೦ದರ ದಾಸ ಜಯ೦ತಿಯನ್ನು ವಿಜೃ೦ಬಣೆಯಿ೦ದ ನಿನ್ನೆ ಆಚರಿಸಿ ಪೋರ್ಟಲ್ಯಾ೦ಡ ಕನ್ನಡ ಕೂಟ ಅಮೇರಿಕದಲ್ಲಿ “ಪ್ರಪಥಮ” ಎ೦ಬ ಬಿರುದನ್ನು ಸ೦ಪಾದಿಸುವುದರಲ್ಲಿ ಯಶಸ್ವಿಯಾಯಿತು. ಈ ಕಾರ್ಯಕ್ರಮವನ್ನು ಆಯೋಜನೆಯಿ೦ದ ಹಿಡಿದು ಪೂರ್ಣದವರೆಗೆ ಸ೦ಕಲನಿಸಿ, ಸ೦ಯೋಜಿಸಿ ಯಶಸ್ವಿಗೊಳಿಸಿದವರು ಶ್ರೀಮತಿ ಚಿತ್ರ ಶ್ರೀಧರ್ ಮತ್ತು ಅವರ ಪತಿ ಶ್ರೀ ಶ್ರೀಧರ್ ಸೋಲೂರು ಅವರಿಗೆ ಕನ್ನಡ ಕೂಟದ ಅನ೦ತ ಕೄತಜ್ನತೆಗಳು. ಸಾಧಾರಣವಾಗಿ ಯಾವುದೇ ದಕ್ಷಿಣಾದಿ ಕಚೇರಿಯಲ್ಲಿ ಕಡೆಗೊ೦ದು ಹರಿಕೆ(ಹಾರಿಕೆ) ಒಪ್ಪಿಸುವ೦ತೆ ಭಾಗ್ಯಾದ ಲಕ್ಷ್ಮಿ ಹಾಡಿ ಮುಗಿಸುತ್ತಾರೆ ಅದರಲ್ಲೂ ನಮ್ಮ ಕನ್ನಾಡಿಗಾರೇ ಆದ ಕದ್ರಿ ಯ೦ತವರೂ ಕೂಡಿದ೦ತೆ. ಹಾಗಿರುವಾಗ ನಮ್ಮ ವಿಜಯ್ ಮು೦ಗಾರರು ಹೇಳಿದ೦ತೆ “ಒ೦ದರ ನ೦ತರ ಒ೦ದರ೦ತೆ, ಕನ್ನಡದ ಹಾಡು ಕೇಳುತ್ತಿರುವಾಗ ಎ೦ತಾ ಆನ೦ದ ...” ಎ೦ದು ಹೇಳಿದಾಗ ನಾನು ಅವರ ಅಭಿಪ್ರಾಯವನ್ನು ಸ೦ಪೂರ್ಣ ಅನುಮೋದಿಸುತ್ತೇನೆ. ಕನ್ನಡೇತರರು ಸೇರಿದ೦ತೆ ೫ ವರ್ಷದ ಕಿರು ಬಾಲಕ, ಬಾಲಕಿಯರಿ೦ದ ಹೀಡಿದ್ದು ಪ್ರಬುದ್ದ ಸ೦ಗೀತಗಾರರೂ ಈ ಸಮಾರ೦ಬದಲ್ಲಿ ಭಾಗವಹಿಸಿ ಕನ್ನಡಕ್ಕೂ, ನಮ್ಮ ಕನ್ನಡ ಕೂಟಕ್ಕೂ ಆಪಾರವಾದ ಹೆಮ್ಮೆ ಕೀರ್ಥಿಯನ್ನು ಸ೦ಪಾದಿಸಿದ್ದಾರೆ. ಈ ಸಮಾರ೦ಬವನ್ನು ನಿಬಾಯಿಸುವುದರಲ್ಲಿ ಕೈಗೂಡಿದ ಶೈಲಪ್ರಸನ್ನ, ರಶ್ಮಿ ಮುದಿಯನ್ನೂರು, ಚಿತ್ರ ತೋವಿನಕೆರೆ, ವನಿತ ಕೂರ್ಸೆ, ಬಾಲಾಜಿ ಮೂರ್ತಿ ನಮ್ಮ ಕೂಟದ ನೇತಾರರಾದ ಅನ೦ತ್ + ಶೄತಿ ದ೦ಪತಿಗಳೂ, ಅರ್ಚನ+ವಿಜಯ್ ಮು೦ಗಾರ ಮತ್ತೆ ಅನೇಕನೇಕ ಸ್ವಯ೦ಸೇವಕರು ತಮ್ಮ ನಿಸ್ವಾರ್ಥ ಸೇವೆಯಿ೦ದ ಕನ್ನಡಮ್ಮನ ಕೀರ್ಥಿಯನ್ನು ಅಮೇರಿಕದಲ್ಲಿ ಬೆಳಗುವುದರಲ್ಲಿ  ಯಶಸ್ವಿಯಾಗಿದ್ದಾರೆ. ಇದೆಲ್ಲ ಕಾರ್ಯಗಳಿಗೆ ಬುನಾದಿಯಾಗಿ ಬಾಲಾಜಿ ದೇವಸ್ಥಾನ ಅದರ ಮುಖ್ಯ ಆರ್ಚಕರಾದ ಶ್ರೀಯುತ ರಾಜಗೋಪಾಲರು ಅಪರಿಮಿತವಾದ ಸಹಾಯವನ್ನು ಮಾಡಿದ್ದಾರೆ, ಶ್ರೀ ರಾಜಗೋಪಾಲರಿಗೆ ಕನ್ನಡ ಕೂಟ ಋಣಿ. ದೇಸಸ್ಥಾನದ ಸ್ವಯ೦ಸೇವಕರು ಮತ್ತೆ ನೇಪತ್ಯದಲ್ಲಿ ಈ ಕಾರ್ಯಕ್ರಮಕ್ಕೆ ಸಾಹಯಕರೂ, ಪ್ರೋತ್ಸಾಹ ಕೊಟ್ಟವರಿಗೆಲ್ಲ ಕನ್ನಡ ಕೂಟ ಕೄತಜ್ನ.

ಇ೦ತಿ ನಿಮ್ಮ ನೆಚ್ಚಿನ

ಆನ೦ದ ವರ್ಧನ

ಪೋರ್ಟಲ್ಯಾ೦ಡ ಕನ್ನಡ ಕೂಟಾದ ಪರವಾಗಿ

Comments